ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ಮಹಮ್ಮದ್ ಗೆ ಸನ್ಮಾನ

ಜಮಖಂಡಿ: ಗುರುವಾರ ಬಿಡುಗಡೆಯಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2 ನೇ ಸ್ಥಾನ ಪಡೆದ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಅಯಾನ್ ನದಾಫ್ ಅವರನ್ನು ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಸ್.ಎಚ್.ಲಗಳಿ ಅವರು ಸಿಹಿ ಹಂಚಿ, ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಅವರು, ಮಹಮ್ಮದ್ ಅಯಾನ್ ನದಾಫರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಅವರ ಮುಂದಿನ ಜೀವನ ಸಾಧನೆಯಿಂದ ಕೂಡಿರಲಿ. ಕಾಲೇಜಿನ ಕೀರ್ತಿ ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭಹಾರೈಸಿದರು.

595 ಅಂಕಗಳೊಂದಿಗೆ ರಾಜ್ಯಕ್ಕೆ 2 ನೇ ರ‌್ಯಾಂಕ್ ಪಡೆದು ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಮಹಮ್ಮದ್ ಅಯಾನ್ ನದಾಫ್ ಅವರನ್ನು ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಂ.ಪುಟ್ಟಣ್ಣನವರ ಮತ್ತು ಸಿ.ಆಯ್.ಕರಲಟ್ಟಿ ಸೇರಿದಂತೆ ಬೋಧಕ ವರ್ಗದವರು ಸನ್ಮಾನಿಸಿದರು.

7tv Karnataka
पत्रकार बंधु भारत के किसी भी क्षेत्र से जुड़ने के लिए सम्पर्क करें